Monday, July 2, 2018

ಅಶೋಕ ಸಿದ್ಧಾಪುರ - Ashoka Siddapura





ಅಶೋಕ ಸಿದ್ಧಾಪುರ,

ಒಂದು ಅದ್ಭುತವಾದ ಸ್ಥಳ, ಒಮ್ಮೆ ಖಂಡಿತವಾಗಿ ಭೇಟಿ ನೀಡಲೇಬೇಕಾದ ಸ್ಥಳಗಳಲ್ಲಿ ಇದು ಕೂಡ ಒಂದು, ಸಾವಿರಾರು ವರ್ಷಗಳ ಹಿಂದಿನ ಮೌರ್ಯರ ಅಖಂಡ ಭಾರತದ ಇತಿಹಾಸದ ವೈಭವದ ಅಸ್ಪಷ್ಟ ಕನ್ನಡಿ, ಐತಿಹ್ಯಡಾ ಕನ್ನಡಿಗೆ ಹಿಡಿದ ಧೂಳನ್ನು ಒರೆಸುವ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿದರೆ, ಜಗತ್ತಿಗೆ ಇದರ ಬಗ್ಗೆ ಪರಿಚಯವೂ ಆಗುತ್ತದೆ ಹಾಗೆ ಅವರಿಗೆ ಪಿ.ಎಚ್ ಡಿ ಕೂಡ ಸಿಗಬಹುದು.

ಯಾವ ಕಾರಣಕ್ಕಾಗಿ ಇದು ನೆನೆಗುದಿಗೆ ಬಿದ್ದಿದೆ ಎಂದು ತಿಳಿಯದು, ಆದರೆ ಇದನ್ನು ಭೇಟಿ ಮಾಡಿ ನೋಡಿದವರಿಗಂತೂ ಇಲ್ಲಿನೆ ಅಳಿದು ಉಳಿದ ವೈಭವದ ಪಳಿಯುಳಿಕೆಗಳನ್ನು ನೋಡಿದರೆ ಒಂದು ಸಣ್ಣ ಅಂದಾಜು ಸಿಗಬಹುದು ಎನಿಸುತ್ತದೆ. ಈ ಸ್ಥಳದಿಂದ ಬಹಳ ಹತ್ತಿರದಲ್ಲಿರುವವರಿಗೂ ಇದು ಇನ್ನು ನಿಲುಕದ ನಕ್ಷತ್ರವಾಗಿರುವುದಕ್ಕೆ, ಇದರ ಪ್ರಚಾರ್ರ ಕೊರತೆಯು ಒಂದು ಮುಖ್ಯ ಕಾರಣ. ಇಲ್ಲಿನ ಜಟಂಗಿ ರಾಮೇಶ್ವರ, ಮೌರ್ಯರ ಸಮಾಧಿಗಳ ಸ್ಥಳಕ್ಕೆ ಹೋದರೆ, ಒಂದು ಜಿಗುಪ್ಸೆ ಭಾವ ಆವರಿಸುತ್ತದೆ, ಅದಕ್ಕೆ ಅನೇಕ ಕಾರಣಗಳಿರಬಹುದು.

ಇಲ್ಲಿ ಅಶೋಕ ಕೆತ್ತಿಸಿದ ಒಂದು ಶಾಸನಾ ಒಂದು ಒಳ್ಳೆಯ ಜೀವನ ಶೈಲಿ ರೂಢಿಸಿಕೊಳ್ಳುವ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಇದನ್ನ ನಮ್ಮ ಹಿತ ಚಿಂತಕರು ಇಂದಿಗೂ ವಿವಿಧ ಮಾಧ್ಯಮದ ಮೂಲಕ ಹೇಳುವುದನ್ನು ನಾವು ಕೇಳಬಹುದು. ಬೌದ್ಧ ಧರ್ರ್ಮವನ್ನು ಸ್ವೀಕರಿಸಿದ ನಂತರ ಸಾಮ್ರಾಟ್ ಅಶೋಕ ಸ್ವತಃ ಬರೆಸಿದ ಶಾಸನ, ಇಂದು ಯಾವ ಪ್ರೇಕ್ಷಕ, ವೀಕ್ಷಕರೂ ಇಲ್ಲದೆ ಬರಡು ಬಿಸಿಲಲ್ಲಿ ಮೂಕವಾಗಿ ನಿಂತಿದೆ.  ಇಲ್ಲಿನ ಇತಿಹಾಸದ ಬಗ್ಗೆ ಬೆಳಕು ಚೆಲ್ಲುವ, ಅದನ್ನು ನಾಡಿಗೆ ಪರಿಚಯಿಸುವಂಥ ಕಾರ್ಯಗಳು ನಡೆಯಬೇಕು ಎನ್ನುವುದು ಇಲ್ಲಿನ ಜನರ ಹಾಗು ಇತಿಹಾಸವನ್ನು ಪ್ರೀತಿಸುವ ಮನಸ್ಸುಗಳ ಆಸೆ, ಇದು ಇಂದಿಗೆ ನೆರವೇರುವುದೋ ಕಾಡು ನೋಡಬೇಕು.

Unknown temple at Siddapura
ಪಾರ್ಶ್ವ ನೋಟ 

ದೇವಸ್ಥಾನದ ಅಳಿದುಳಿದ ಭಾಗಗಳು , 

ದೇವರಿಲ್ಲದ ಗರ್ಭಗುಡಿ 
ಇಲ್ಲಿ ಕೆಲವು ಕಡೆ ದೇವಸ್ಥಾನ ಇನ್ನು ಕಟ್ಟುತ್ತಿರುವಾಗಲೇ ಯಾವುದೊ ಕಾರಣಕ್ಕೆ ಬಿಟ್ಟ ಹಾಗೆ ಕಾಣುತ್ತದೆ, ಇದರ ಮತ್ತೊಂದು ದಿಕ್ಕಿನಲ್ಲಿರುವ ಬೆಟ್ಟದಲ್ಲಿ (ಬ್ರಹ್ಮಗಿರಿ ಬೆಟ್ಟ), ಮಠವಿದ್ದು, ಭಕ್ತರನ್ನು ಸ್ವಾಗತಿಸುತ್ತದೆ, ಅಲ್ಲಿಗೆ ಹೋಗಬೇಕಾದರೆ, ನಿರ್ಜನ ಡಾಅರಿಯಲ್ಲಿ ಸಾಗಿ ಬೆಟ್ಟ ಹತ್ತಬೇಕು, ಒಮ್ಮೆ ಭೇಟಿ ಕೊಡಲು ಅತ್ಯುತ್ತಮ ತಾಣ. ಇಲ್ಲಿ ನನಗೆ ತಿಳಿದ ಮಾಹಿತಿ ತಿಳಿಸಿದ್ದೇನೆ, ತಿಳಿದವರು ಇನ್ನು ಹೆಚ್ಚ್ಚಿನ ಮಾಹಿತಿ ನೀಡಬಹುದು.



No comments:

Post a Comment

Click Here to View Full Images